hotaks444
New member
- Joined
- Nov 15, 2016
- Messages
- 54,521
ಚರಿತ್ರೆ ಪುನರಾವರ್ತಿಸುತ್ತದೆ ಎನ್ನುತ್ತಾರೆ ಚರಿತ್ರಕಾರರು. ಇದು ಅಕ್ಷರಶಃ ನಿಜ. ಚರಿತ್ರೆ ಜೀವನವನ್ನು ನಿಂತ ನೀರಾಗಲು ಬಿಡುವುದಿಲ್ಲ. ಯುವ ಇಂಡಿಯನ್ ಇದಕ್ಕೆ ಜ್ವಲಂತ ನಿದರ್ಶನ. ಹಳೆಯದೆಲ್ಲವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಯುವ ಇಂಡಿಯನ್ ಹಳೆಯ ಕಥೆಗೆ ಹೊಸ ನಿರೂಪಣೆ ಬರೆಯುತ್ತಿದ್ದಾರೆ. ಆದರೆ ಆತ ಜೀವನದ ನೀತಿ ತತ್ವವಾದ ಬುಡವನ್ನು ಗಟ್ಟಿಯಾಗಿಟ್ಟು ಒಣಗಿದ, ಕುಲಗೆಟ್ಟ, ಅರ್ಥ ರಹಿತ ಸಂಪ್ರದಾಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದನ್ನು ಸಂಪ್ರದಾಯವಾದಿಗಳು ವಿರೋಧಿಸುತ್ತಿರುವುದು ಸಹಜ. "ಈಗಿನ ಕಾಲದವರಿಗೆ ಸಂಪ್ರಾಯದ ಬೆಲೆ ಗೊತ್ತಿಲ್ಲ" ಎನ್ನುವುದು ಅವರ ಅಂಬೋಣ. ಆದರೆ ಈ ಮಾತು ಎಷ್ಟು ಹಳೆಯದು ಅನ್ನೋದು ಅವರಿಗೆ ಗೊತ್ತಿಲ್ಲ. ಅರಿಸ್ಟಾಟಲ್ ಕೂಡ ಈ ಮಾತನ್ನ ಹೇಳ್ದ, ಅಂದರೆ ಎಲ್ಲ ಹಳೆ ಪೀಳಿಗೆಯವರಿಗೆ ಹೊಸ ಪೀಳಿಗೆ ತಪ್ಪು ದಾರಿಯಲ್ಲಿದೆ ಎಂದೇ ನಂಬಿಕೆ.
ಯುವ ಇಂಡಿಯನ್ ಎಲ್ಲಾ ಯುವ ಪೀಳಿಗೆಗಳಂತೆ ಎಲ್ಲವನ್ನೂ ಗಾಳಿಗೆ ತೂರದೆ ಜೊಳ್ಳನ್ನು ಗತ್ತಿಯಿಂದ ಬೇರ್ಪಡಿಸುವ ಸಾಮರ್ಥ್ಯ ಹೊಂದಿದ್ದಾನೆ ಎನ್ನೋದು ಭಾರತದ, ಅದರ ತತ್ವದ, ಸಂಸ್ಕೃತಿಯ ಮೇಲ್ಮಟ್ಟವನ್ನು ಹಾಗೂ ಆ ಸಂಸ್ಕೃತಿ ಅವನಲ್ಲಿ ಎಷ್ಟು ಚೆನ್ನಾಗಿ ಬೇರು ಬಿಟ್ಟಿದೆ ಎನ್ನುವುದು ನಮ್ಮ ಹೆಮ್ಮೆಯ ವಿಷಯ.